ಮಂಜೇಶ್ವರ, ಜನವರಿ 11:ಮುಸ್ಲಿಂ ಲೀಗ್ ಕಾರ್ಯಕರ್ತ ಕೊಯಿಪ್ಪಾಡಿಯ ಹಮೀದ್ ಕೊಲೆ ಪ್ರಕರಣದ ಮೂರನೇ ಆರೋಪಿಯನ್ನು ಕುಂಬಳೆ ವೃತ್ತ ನಿರೀಕ್ಷಕ ದಾಮೋದರನ್ ನೇತೃತ್ವದ ಪೋಲೀಸರ ತಂಡ ಇಂದು ಬೆಳಿಗ್ಗೆ ಆರಿಕ್ಕಾಡಿಯಿಂದ ಬಂಧಿಸಿದೆ. ಬಂಧಿತನನ್ನು ಕುಂಬಳೆ ಪೆರ್‌ವಾಡ್ ಸಮುದ್ರ ತೀರದ ಕಾಲನಿಯ ಸಮದ್(21) ಎಂದು ತಿಳಿದು ಬಂದಿದೆ.
ಈ ಹಿಂದೆ ಇದೇ ಪ್ರಕರಣದ ಒಂದು ಹಾಗೂ ಎರಡನೇ ಆರೋಪಿಗಳಾದ ನಿಯಾಸ್ ಹಾಗೂ ಫಾರೂಕ್‌ನನ್ನು ಬಂಧಿಸಲಾಗಿತ್ತು. ಮಂಗಳವಾರ ರಾತ್ರಿ ಹಮೀದ್ ಸ್ನೇಹಿತರೊಂದಿಗೆ ಕುಂಬಳೆ ಪೇಟೆಯಿಂದ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ ಇರಿದು ಕೊಲೆ ಮಾಡಲಾಗಿತ್ತು ಇದರೊಂದಿಗೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಪೋಲೀಸರು ತಿಳಿಸಿದ್ದಾರೆ.